Yoga Kavana

ಹಸಿರಿನ ಒಡಲಲಿ ದೇವರ ನೆಲೆಯಲ್ಲಿ
ನಗರದ ಗದ್ದಲ ಸುಳಿಯದ ಯಡೆಯಲಿ
ಹಿರಿಯರು ಕಿರಿಯರು ಪುರುಷರು ಸ್ತ್ರೀಯರು
ಎಲ್ಲ ಒಂದೆಂಬ ಭಾವದಲಿ ಸೇರಿಹೆವಿಲ್ಲಿ ಯೋಗದಲಿ
ಜ್ಞಾನಿ ಪಾಮರರೆಂಬ ಧಣಿಯು ಸೇವಕರೆಂಬ
ಥರಥಮವಿಲ್ಲದೀ ಕೇಂದ್ರದಲಿ
ಗುರುಕುಲಮಾದರಿ ಕಲಿಕೆಯ ಯೋಗಕೆ
ಪ್ರತಿದಿನ ಏಳುತ ನಸುಕಿನಲ್ಲಿ
ಕಳೆಯುವ ಇಲ್ಲಿ ಹುರುಪಿನಲಿ
ಸ್ನೇಹದ ಬಾಂಧವ ಕಟ್ಟುತಲಿ
ಗೌರವ ಮೆರೆಯುತ ಸೆರ್ವರಲಿ
ಹರುಷವ ಎಲ್ಲೆಡೆ ಹಂಚುತಲಿ
ಸಾರ್ಥಕ ಹೊಂಧುವಾ ಬಾಳಿನಲಿ
Composed by – L.V. Suryanarayana