ಪ್ರತಿವರ್ಷದಂತೆ ಈ ವರ್ಷದ ಗುರುಪೂರ್ಣಿಮೆ ದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ ಭಾನುವಾರ 21 ಜುಲೈ 2024 ರಂದು ಬೆಳಿಗ್ಗೆ 6 ರಿಂದ 8.30ರವರೆಗೆ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುವುದು. ನಮ್ಮ ಯೋಗ ಸ್ನೇಹಿತರಿಗೆಲ್ಲರಿಗೂ ಅಂದು ಭಜನೆ/ನೃತ್ಯ ಮಾಡಲು, ಹಾಡು ಹೇಳಲು, ಮಾತನಾಡಲು ಅವಕಾಶವಿರುತ್ತದೆ.
ಈ ಸಂದರ್ಭದಲ್ಲಿ ನಾಡಿನ ಹೆಸರಾಂತ ಗಮಕ ವಿದುಷಿ ಶ್ರೀಮತಿ ಗಂಗಮ್ಮ ಕೇಶವಮೂರ್ತಿ ಯವರು ನಮ್ಮ ಕರೆಗೆ ಓಕೊಟ್ಟು “ಗುರುತರವಾದ ಗುರುವಿನ ಪಾತ್ರ ಇಂದು ಹೆಚ್ಚು ಪ್ರಸ್ತುತ” ಶೀರ್ಷಿಕೆಯಲ್ಲಿ ಗಮಕ ವಾಚನ, ವ್ಯಾಖ್ಯಾನಮಾಡಲು ಒಪ್ಪಿರುತ್ತಾರೆ.
ಕಾರ್ಯಕ್ರಮದ ಕೊನೆಗೆ ಉಪಾಹಾರ ಏರ್ಪಡಿಸಲಾಗಿದೆ.
ನಮ್ಮ ಯೋಗ ಬಂಧುಗಳೆಲ್ಲರೂ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕೋರುತ್ತೇವೆ.