ಕರೋನ ತಂದ ತುರ್ತು ಪರಿಸ್ಥಿತಿಯಲ್ಲಿ, ನಮ್ಮ ಸಾಮಾಜಿಕ ಕೆಲಸ
ನಮ್ಮ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದ ವತಿಯಿಂದ ಸುಮಾರು 25 ದಿನಗಳ ಹಿಂದೆ ಕಟ್ಟಡ-ನಿರ್ಮಾಣದಲ್ಲಿ ತೊಡಗಿರುವ ಮಹಾಲಕ್ಷ್ಮೀ ಬಡಾವಣೆಯಲ್ಲಿ ವಾಸವಾಗಿರುವ ಸುಮಾರು 75 ಕೆಲಸಗಾರರಿಗೆ ಅಕ್ಕಿ, ಬೇಳೆ ಹಾಗು ಇನ್ನಿತರೇ ದಿನಬಳಕೆ ಆಹಾರ ಸಾಮಗ್ರಿಗಳನ್ನು ನಾವು ಹಂಚಿದ್ದೆವು. ಪ್ರಸ್ತುತ ಕರೋನ ತಂದ ತುರ್ತು ಪರಿಸ್ಥಿತಿಯಲ್ಲಿ, ನಮ್ಮ ಸಾಮಾಜಿಕ ಕೆಲಸಗಳನ್ನು ಮುಂದುವರೆಸುತ್ತಾ, ರಾಜಾಜಿನಗರ ಅರ್-ಬ್ಲಾಕ್ ವಿಳಾಸದ ಗುಡಿಸಲ-ನಿವಾಸದಲ್ಲಿರುವ 63 ಕುಟುಂಬಗಳಿಗೆ 10-15 ದಿನಗಳ ಮಟ್ಟಿಗೆ ಸಾಕಾಗುವ ದಿನಸಿ ಸಾಮಗ್ರಿಗಳನ್ನು 29 ಏಪ್ರಿಲ್ 2020 ಹಂಚಿದೆವು. ಈ ಸಾಮಾಜಿಕ ಚಟುವಟಿಕೆಗಾಗಿ ನಮ್ಮೆಲ್ಲ ಸ್ನೇಹಿತರು ಶ್ರದ್ಧೆಯಿಂದ ಸೇವೆ ಸಲ್ಲಿಸಿದ್ದಲ್ಲದೆ, ರೂ.70,000 ಧನ ಸಹಾಯ ಮಾಡಿರುವುದು ಬಹಳ ಸಂತಸದ ವಿಚಾರ.