ಶ್ರೀ ಪ್ರಸನ್ನ ವೀರಾಂಜನೇಯ ಸೇವಾ ದತ್ತಿ ಹಾಗೂ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದಲ್ಲಿ
ಶುಕ್ರವಾರ, ೧೫ ಆಗಸ್ಟ್ ೨೦೨೫ ರಂದು ಬೆಳಿಗ್ಗೆ ೬.೩೦ ರಿಂದ ೮.೦೦ ಗಂಟೆಯವರೆಗೆ ದೇಶದ ೭೯ನೇ ಸ್ವಾತಂತ್ರ್ಯ ದಿನಾಚರಣೆ ನಡೆಸಲಾಯಿತು.
ಯೋಗ ಶಾಲೆಯ ಗುರುಗಳಾದ ಶ್ರೀ ನಾಗೇಶ ಅವರು ಎಲ್ಲ ಯೋಗ ಬಂಧುಗಳಿಗೆ ವೇದಿಕೆಮೇಲೆ ಭಾಗವಹಿಸಿ, ನಮ್ಮ ದೇಶದ ಸ್ವಾತಂತ್ರ ಪೂರ್ವ, ಬದಲಾವಣೆ ತಂದ ಹಾಗೂ ವಿಕಸಿತ ಭಾರತದ ತಮ್ಮ ಅನಿಸಿಕೆ ಮತ್ತು ಪರಿಕಲ್ಪನೆಯನ್ನು ತಮ್ಮ ಮಾತುಗಳಲ್ಲಿ, ಕೀರ್ತನೆ, ಹಾಡು, ರೇಖಾ ವರ್ಣ ಚಿತ್ರಗಳ ಮುಖಾಂತರ ಹಂಚಿಕೊಳ್ಳಲು ಅವಕಾಶ ಕಲ್ಪಿಸಿದ್ದರು.
ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದದ ಶಿಸ್ತಿನ ವಿದ್ಯಾರ್ಥಿ, ಮಾಜಿ ಸೇನಾ ಅಧಿಕಾರಿ ಹಾಗೂ ಬಹುಮುಖ ಪ್ರತಿಭೆಯ ಶ್ರೀ ಪ್ರಕಾಶ್ ಯಾದವ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ, ಧ್ವಜರೋಹಣ ನಿರ್ವಹಿಸಿ, ಪ್ರತಿಯೊಬ್ಬರು ಆತ್ಮಾಭಿಮಾನ, ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕೆಂದರು. ಭಾವೈಕ್ಯತೆ ಒಂದು ರಾಷ್ಟ್ರದ ಸಬಲತೆಗೆ ಮತ್ತು ಪ್ರಗತಿಗೆ ಮುಖ್ಯವಾಗಿದೆ; ಪ್ರಪಂಚದಲ್ಲಿ ೩ನೇ ಬಲಿಷ್ಟ ರಕ್ಷಣಾ ರಾಷ್ಟ್ರವೆಂದು ಪರಿಗಣಿಸಿರುವ ಭಾರತದಲ್ಲಿ ನಮ್ಮ ರಕ್ಷಣಾ ಸಿಬ್ಬಂದಿಗಳ ಶ್ರಮ ಮತ್ತು ಬಲಿದಾನಗಳನ್ನು, ಶ್ರೀ ಯಾದವ್ ಅವರು ಸ್ಮರಿಸಿದರು. ಶ್ಲಾಘಸಿದರು.
ಶಾಲೆಯ ಶಿಕ್ಷಕಿ, ಶ್ರೀಮತಿ ಲತಾರವರ ಕೈಚಳಕಿನ ರಂಗುರಂಗಿನ ರಂಗೋಲಿ ಎಲ್ಲರ ಗಮನ ಸೆಳೆಯಿತು.
ಶ್ರೀ ಪ್ರಸನ್ನಕುಮಾರ ಅವರು ಕಾರ್ಯಕ್ರಮ ನಿರೂಪಣೆ ಸೊಗಸಾಗಿಸಾಗಿತ್ತು. ಶ್ರೀ ಚಂದ್ರಶೇಖರ್ ಅವರು ತಮ್ಮ
ಕ್ಯಾಮರಾದಲ್ಲಿ ಕಾರ್ಯಕ್ರಮದ ಎಲ್ಲಾ ಫೋಟೋಗಳನ್ನು ಕ್ಲಿಕ್ಕಿಸಿದರು. ನಂತರ ಸಿಹಿ ತಿಂಡಿ ಮತ್ತು
ಬಾದಾಮಿಹಾಲು ವಿತರಿಸುವುದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು .
ಕಾರ್ಯಕ್ರಮದ ಚಿತ್ರಗಳನ್ನು ಈ ಕೊಂಡಿಯಲ್ಲಿ ನೋಡಿ—> https://photos.app.goo.gl/7YdP5t6xYiuCAv2s5