ಮಹಾಲಕ್ಷ್ಮೀಪುರದ ಹಿರಿಯ ನಾಗರೀಕರ ವೇದಿಕೆ ಸಂಸ್ಥೆಯಲ್ಲಿ ನಮ್ಮ ಹಿರಿಯ ಶಿಕ್ಷಕರಾದ ಶ್ರೀಯುತ ಪ್ರಸನ್ನರವರು ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದ ವತಿಯಿಂದ ಶ್ರದ್ಧೆಯಿಂದ, ಸತತವಾಗಿ ಕಳೆದ 30 ತಿಂಗಳಿಂದ ಯೋಗ ತರಗತಿಗಳನ್ನು ನಡೆಸಿಕೊಂಡುಬಂದಿರುವುದು ಸಂತಸದ ವಿಚಾರ.
ನಮ್ಮ ಬಡಾವಣೆಯಲ್ಲಿ ಶ್ರೀನಿವಾಸ ದೇವಸ್ಥಾನದ ಸಮೀಪ ನೂತನವಾಗಿ ನೆಚ್ಚಿನ ಶಾಸಕ ಶ್ರೀ ಗೋಪಾಲಯ್ಯನವರ ನೇತ್ರತ್ವದಲ್ಲಿ ನಿರ್ಮಿಸಿದ ಕಟ್ಟಡವನ್ನು ಹಿರಿಯ ನಾಗರೀಕರ ವೇದಿಕೆ ಪರವಾನಿಗೆ ಕೊಟ್ಟಿರುವರು. ಈ ನವೀನ ಕಟ್ಟಡದಲ್ಲಿ ಈ ವೇದಿಕೆಯವರು ಇದೇ 21 ಆಗಸ್ಟ್ ರಂದು ನಮ್ಮ SPV ಕೇಂದ್ರ ಯೋಗ ತರಗತಿಗಳನ್ನು ಶ್ರೀ ಪ್ರಸನ್ನ ಆವರ ನೇತ್ರತ್ವದಲ್ಲಿ ಪುನರ್ಪ್ರಾರಂಬಿಸಿತು. ನಮ್ಮ ಶಾಲೆಯ ಮತ್ತಿತರ ಶಿಕ್ಷಕರು, ವಿದ್ಯಾರ್ಥಿಗಳನ್ನೊಳಗೊಂಡಂತೆ ಸುಮ ಮತ್ತು ನಾಗೇಶರ ಈ ಸಂದರ್ಭದಲ್ಲಿ ಹಜಾರಿದ್ದು ಕಾರ್ಯಕ್ರಮದ ಉದ್ಘಾಟನೆ ನಡೆಸಿಕೊಟ್ಟರು
