SPV Yoga

21 ಫೆಬ್ರವರಿ 2026 -ರಥಸಪ್ತಮಿಯಂದು 1009 ಸೂರ್ಯನಮಸ್ಕಾರಗಳನ್ನು ಯಶಸ್ವಿಯಾಗಿ ಮಾಡಿದಯೋಗ ಪಟುಗಳಿಗೆ ಪ್ರಮಾಣಪತ್ರ ವಿತರಣಾ ಸಂಭ್ರಮ

ಪ್ರತ್ಯಕ್ಷ ದೈವ ಸೂರ್ಯ ನಾರಾಯಣ ತನ್ನ ಪಥವನ್ನು   ಬದಲಾಯಿಸುವ ದಿನವಾದ ರಥಸಪ್ತಮಿಯ   ದಿನ ನಮ್ಮ ಯೋಗ ಶಾಲೆಯಲ್ಲಿ ಕಳೆದ 8 ವರ್ಷಗಳಿಂದ ಮಾಡಿಕೊಂಡು ಬರುತ್ತಿರುವ 1008 ಸೂರ್ಯನಮಸ್ಕಾರಗಳನ್ನು ಈ ವರ್ಷವೂ ಸಹ ದಿನಾಂಕ 25.01.2026 ರಂದು ಸುಮಾರು 10 ಯೋಗ ಶಾಲೆಗಳಲ್ಲಿ ಯೋಗಾಭ್ಯಾಸಗಳನ್ನು ಮಾಡಿಕೊಂಡಿರುವ ಪಟುಗಳು ನಮ್ಮೊಡನೆ ಸೇರಿ 55 ಜನ ಬೆಳಗ್ಗೆ 5.00ಘಂಟೆಗೆ ಶ್ರೀ ಅಶೋಕ್  ಕುಮಾರ್ ರವರು ನಡೆಸಿಕೊಟ್ಟ ಅಗ್ನಿಹೂತ್ರದ    ನಂತರ ಕ್ಷೇತ್ರ ದೇವತೆಯಾದ ಶ್ರೀ ಪ್ರಸನ್ನ ವೀರಾಂಜನೇಯ ನಮಿಸುತ್ತಾ ಪ್ರಾರಂಭವಾದ ಸೂರ್ಯನಮಸ್ಕಾರಗಳು (ರಾತ್ರಿ) 8.00 ಘಂಟೆಯವರೆಗೂ ಸತತವಾಗಿ 1009 ಸೂರ್ಯನಮಸ್ಕಾರಗಳನ್ನು ಯಶಸ್ವಿಯಾಗಿ ಮಾಡಿದ ಯೋಗ ಪಟುಗಳಿಗೆ ಶ್ಲಾಘಿಸಿ ಪ್ರಮಾಣಪತ್ರ ವಿತರಣೆಯನ್ನು ಶನಿವಾರ 21.02.2026 ರಂದು ಏರ್ಪಡಿಸಲಾಗಿತ್ತು.

ನಮ್ಮ ಶ್ರೀ ನಾಗೇಶ್ ರಾವ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾಕ್ಟರ್ ಎಂ. ಏನ್. ರಮೇಶ್ ಸ್ವಾಗತಿಸಿ ಆಗಮಿಸಿದಂತಹ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೂ ಸ್ವಾಗತವನ್ನು ಕೋರಿದರು.  ನಂತರ ಮುಖ್ಯ ಅತಿಥಿಗಳಿಗೆ ಕಿರುಕಾಣಿಕೆ ಗಳನ್ನು ಅರ್ಪಿಸಿ ನಮ್ಮ ಯೋಗ ಶಾಲೆಯ ಪರಿಚಯ ಮತ್ತು, ಶ್ರೀ ಪ್ರಸನ್ನ ವೀರಾಂಜನೇಯ ಸೇವಾ ಟ್ರಸ್ಟ್ ನಲ್ಲಿ ಮಾಡುತ್ತಿರುವ ಸೇವೆಗಳನ್ನು ಕಿರುದಾಗಿ ನಾಗೇಶರು ತಿಳಿಸಿಕೊಟ್ಟರು,

ನಮ್ಮ ಯೋಗಾ ಪ್ರವೀಣರಾದ ಹಾಗೂ ಗುರುಗಳಾದ ಶ್ರೀ ಲೋಕೇಶ್ ಹೆಗಡೆ ಯವರು ಅತಿಥಿಗಳ ಕಿರುಪರಿಚಯವನ್ನು ಮಾಡಿಸುತ್ತಾ  ಡಾ. ರಮೇಶ್ ಎಂ ಎನ್, ಎಸ್-ವ್ಯಾಸ ಡೀಮ್ಡ್-ಟು-ಬಿ-ಯೂನಿವರ್ಸಿಟಿಯಲ್ಲಿ ಪ್ರಮುಖ ಸಂಶೋಧಕರಾಗಿ, “ಅನ್ವೇಷಣಾ” ಸಂಶೋಧನಾ ಪ್ರಯೋಗಾಲಯಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ;   ಅವರು 14 ವರ್ಷಗಳಿಗೂ ಹೆಚ್ಚು ಸಂಶೋಧನಾ ಅನುಭವವನ್ನು ಹೊಂದಿದ್ದಾರೆ ಎಂದರು.  ಅವರ ಅತಿ ಒತ್ತಡದ ಕಾರ್ಯ ಚಟುವಟಿಕೆ ಸಮಯದಲ್ಲೂ ನಮ್ಮ ಯೋಗ ಶಾಲೆಗೆ ಚೆನ್ನೈಯಿಂದ ಬಿಡವು ಮಾಡಿಕೊಂಡು  ಪ್ರಮಾಣಪತ್ರ ಪ್ರದಾನ ಕಾರ್ಯಕ್ರಮಕ್ಕೆ ಆಗಮಿಸಿದಕ್ಕಾಗಿ,  ಕೃತಜ್ಞತೆಯನ್ನು ಸಲ್ಲಿಸಿದರು.   

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾಕ್ಟರ್ ಎಂ. ಏನ್. ರಮೇಶ್ ರವರು 2025 ರಲ್ಲಿ, 37 ಗಂಟೆಗಳಲ್ಲಿ 20,000 ನಿರಂತರ ಸೂರ್ಯ ನಮಸ್ಕಾರಗಳನ್ನು ಮಾಡುವ ಮೂಲಕ ವಿಶ್ವ ದಾಖಲೆಯನ್ನು ಸ್ಥಾಪಿಸಿದ ಹರಿಯಾಣದ 30 ವರ್ಷದ ಶ್ರೀ ಸಂದೀಪ್ ಆರ್ಯ ಅವರ ಸಾಧನೆಯನ್ನು ಸ್ಮರಿಸಿದರು, ಅಂತೆಯೇ, ಶ್ರೀ ಸಂದೀಪ್ ಅವರ ಈ ಸಾಧನೆ, ಅವರ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರಕ್ರಿಯೆ ಮತ್ತು ಸಾಮರ್ಥ್ಯಗಳ ಬಗ್ಗೆ ಸಂಶೋಧನೆಗಳನ್ನು S-VYASA ವಿಶ್ವವಿದ್ಯಾನಿಲಯ ಮಾಡಿರುವುದನ್ನು ಉಲ್ಲೇಖಿಸಿದರು.  S-VYASA ವಿಶ್ವವಿದ್ಯಾನಿಲಯದ ಅನ್ವೇಷಣಾ ಸಂಶೋಧನಾ ಪ್ರಯೋಗಾಲಯದಲ್ಲಿ ಯೋಗ, ಪ್ರಾಣಾಯಾಮ ಮತ್ತು ಧ್ಯಾನದ ಕುರಿತು ಪುರಾವೆ ಆಧಾರಿತ ಸಂಶೋಧನೆಯ ಬಗ್ಗೆ ವಿವರಿಸುತ್ತಾ ಡಾ. ರಮೇಶ್ ರವರು ಯೋಗ ಮತ್ತು ಪ್ರಾಣಾಯಾಮ ಅಭ್ಯಾಸ ಮಾಡುವುದರಿಂದ ನಮ್ಮ ಅನುಭವಕ್ಕೆ ಬರುವ ಪ್ರಯೋಜನಗಳು ಮತ್ತು ಅನುಕೂಲಗಳನ್ನು ಸಂಶೋಧನೆ ಮುಖಾಂತರ ಪರಿಶೀಲಿನಿ ದೃಢೀಪಡಿಸಲಾಗುವುದೆಂದು  ತಮ್ಮ ಸಮಗ್ರ ಭಾಷಣದಲ್ಲಿ ವಿವರಿಸಿದರು.

1009 ಸುತ್ತಿನ ಸೂರ್ಯನಮಸ್ಕಾರಗಳನ್ನು ಯಶಸ್ವಿಯಾಗಿ ಮುಗಿಸಿದ ಯೋಗ ಸಾಧಕರು, ಅತ್ಯಂತ ಕಾತುರದಿಂದ, ಸಂಭ್ರಮದಿಂದ,  ಉತ್ಸಾಹದಿಂದ,  ಪ್ರಮಾಣಪತ್ರಗಳನ್ನು ಮುಖ್ಯ ಅತಿಥಿಗಳ ಅಮೃತ ಹಸ್ತದಿಂದ ಸ್ವೀಕರಿಸಿ ಖುಷಿಪಟ್ಟರು.  ಈ ಸಾಲಿನ ರಥಸಪ್ತಮಿಯಲ್ಲಿ (ಸಂಪೂರ್ಣ ಪ್ರಮಾಣದಲ್ಲಿ ಸೂರ್ಯನಮಸ್ಕಾರಗಳನ್ನು ಮುಗಿಸದ) ಕನಿಷ್ಟ 600 ಸುತ್ತಿನ ಮಾಡಿದ ಯೋಗಾಭ್ಯಾಸಿಗಳಿಗೆ (ಆಮೇರಿಕಾದಲ್ಲಿ ವಾಸವಾಗಿರುವ ಆನ್ಲೈನ್ ನಲ್ಲಿ ಭಾಗವಹಿಸಿದ ಶ್ರೀಮತಿ ಜ್ಯೋತಿಶ್ರೀ ಅವರನ್ನೂ  ಒಳಗೊಂಡತೆ)  ಪ್ರಶಂಸನಾ ಪತ್ರಗಳನ್ನು ವಿತರಣೆ ಮಾಡಲಾಯತು.  ಆದಲ್ಲದೆ, ಮೊದಲ ಬಾರಿಗೆ 1009 ಸುತ್ತುಗಳನ್ನು ಈ ವರ್ಷ ಸಾಧನೆ ಮಾಡಿದ ಯೋಗಪಟುಗಳಿಗೆ ಉತ್ತೇಜನ ಬಹುಮಾನವನ್ನೂ ನೀಡಿದ್ದು ವಿಶೇಷವಾಗಿತ್ತು.

ನಮ್ಮ ಯೋಗ ಶಾಲೆಯ ಪ್ರಮುಖರಲ್ಲಿ ಒಬ್ಬರಾದ ಶ್ರೀ ಶಾಂತಕುಮಾರ್ ರವರು ಅತಿ ಸೊಗಸಾಗಿ, ವರ್ಣರಂಜಿತವಾದ ಆಗಮಿಸಿದ ಅತಿಥಿಗಳಿಗೆ, ವಿದ್ಯಾರ್ಥಿಗಳಿಗೆ, ಗುರುಗಳಿಗೆ, ಹಾಗೂ ಎಲ್ಲರಿಗೂ ವಂದನೆಗಳನ್ನು ಅರ್ಪಿಸಿದರು,

ರಾಷ್ಟ್ರಗೀತೆನಂತರ ಬಿಸಿಬಿಸಿಯಾದ, ರುಚಿಯಾದ ಊಟದ ವ್ಯವಸ್ಥೆಯೂ ಕಾರ್ಯಕ್ರಮಕ್ಕೆ ಇನ್ನಷ್ಟು ಕಳೆಕೊಟ್ಟಿತು.

ವರದಿ ಕೃಪೆ : ಶ್ರೀ ಕೆ. ಆರ್. ಪ್ರಸನ್ನ ಕುಮಾರ್ ಯೋಗ ಗುರುಗಳು

ಚಿತ್ರಗಳಿಗಾಗಿ ಈ ಕೊಂಡಿಯನ್ನು ಹೊಕ್ಕಿ :

https://photos.app.goo.gl/1WsWp5B3T1wXNPq17

Leave a Comment

Your email address will not be published. Required fields are marked *

Scroll to Top