SPV Yoga

27 ಮಾರ್ಚ್ 2026ರಂದು ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದಲ್ಲಿ ಭಕ್ತಿ ಮತ್ತು ಶ್ರದ್ಧೆಯಿಂದ ಶ್ರೀ ರಾಮನವಮಿ ಆಜರಿಸಲಾಯಿತು.   

ಕಾರ್ಯಕ್ರಮದ ಮುಖ್ಯಾಂಶಗಳು ಇಂತಿದ್ದವು:

  1. ಲತಕ್ಕರ ರಂಗು-ರಂಗಿನ ರಂಗೋಲಿ ಚಿತ್ತಾರ ಎಲ್ಲರ ಮನಸೆಳೆಯಿತು;
  2. ಪವಿತ್ರಾ-ಲತಕ್ಕ ಇವರ ಯುಗಳ ದೇವತಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯ್ತು;  
  3. ಹಿರಿಯ ಗುರುಗಳಾದ ಶ್ರೀ ಪ್ರಸನ್ನ ಅವರು ಅಲಂಕರಿಸಿದ ಅಯೋಧ್ಯಾ ಬಲರಾಮನ ಚಿತ್ರಪಟಕ್ಕೆ ಮಂತ್ರ-ಪುಷ್ಪ ಸಮೇತ ಪೂಜೆ ನಡೆಸಿಕೊಟ್ಟರು;
  4. ಚಿನ್ನರು ಅವರು ತಯಾರಿಸಿದ ಬಣ್ಣದ ರಾಮದೇವರ ಚಿತ್ರಗಳನ್ನು ಪ್ರದರ್ಶಿಸಿದರು ಹಾಗೂ ಮರ್ಯಾದ ಪುರುಷೋತ್ತಮರ ಗುಣವಿಶೇಷಣಗಳನ್ನು ಮನನ ಮಾಡಿದರು;
  5. ಮತ್ತೊಬ್ಬ ಗುರುಗಳಾದ ಶ್ರೀ ಕೇಶವರು ಹುರುಪಿನ ರಾಮ ಎಲ್ಲರೊಂದಿಗೆ  ಭಜನೆಯನ್ನು ಹೇಳಿಕೊಟ್ಟು ನಡೆಸಿಕೊಟ್ಟರು.
  6. ಕಿರಿಯರು, ಯುವಕರೂ ಉತ್ಸಾಹದಿಂದ ಭಾಗವಹಿಸಿದ ಸಮಾರಂಭದಲ್ಲಿ ನಾಗೇಶರು, ರಾಮಾಯಣ ಎನ್ನುವುದು ಕೇವಲ ಒಂದು ಕಥೆಯಲ್ಲ, ಅದು ಬದುಕಿನ ದಾರಿದೀಪ. ‘ಇಂದಿನ ಆಧುನಿಕ ಯುಗದಲ್ಲೂ ಶ್ರೀರಾಮನ ಜೀವನ ನಮಗೆ ಹಲವು ಮುಖ್ಯ ಪಾಠಗಳನ್ನು ಕಲಿಸುತ್ತದೆ’ ಎಂದು ಕೆಲವು ಉದಾಹರಣೆಯನ್ನು ಹೀಗೆ ತಿಳಿಸಿದರು :

ಅ . ಪಿತೃವಾಕ್ಯ ಪರಿಪಾಲನೆ: ತಂದೆಯ ಮಾತಿಗೆ ಗೌರವ ನೀಡಿ ಹದಿನಾಲ್ಕು ವರ್ಷ ವನವಾಸಕ್ಕೆ ಹೋದ ರಾಮನು, ಇಂದಿನ ಯುವ ಪೀಳಿಗೆಗೆ ಹಿರಿಯರ ಮೇಲಿನ ಗೌರವ ಹೇಗಿರಬೇಕೆಂದು ತೋರಿಸಿಕೊಟ್ಟಿದ್ದಾನೆ.

ಆ.  ಧರ್ಮ ಮತ್ತು ಸತ್ಯ: ಎಷ್ಟೇ ಕಷ್ಟ ಬಂದರೂ ಸತ್ಯದ ಹಾದಿ ಬಿಡಬಾರದು ಎಂಬುದು ರಾಮನ ಸಂದೇಶ. ಅದಕ್ಕಾಗಿಯೇ ಅವನನ್ನು ಮರ್ಯಾದಾ ಪುರುಷೋತ್ತಮಎನ್ನಲಾಗುತ್ತದೆ.

ಇ . ನಾಯಕತ್ವ ಮತ್ತು ತಂಡದ ಕೆಲಸ: ಹನುಮಂತ ಮತ್ತು ವಾನರ ಸೇನೆಯನ್ನು ಒಗ್ಗೂಡಿಸಿ ರಾಮನು ಸಾಧಿಸಿದ ವಿಜಯವು, ನಾಯಕತ್ವ ಗುಣಗಳಿಗೆ ಅತ್ಯುತ್ತಮ ಉದಾಹರಣೆ.

ಈ. ಅಹಂಕಾರದ ಅಂತ್ಯ: ಅತೀವ ಜ್ಞಾನವಿದ್ದರೂ ಅಹಂಕಾರದಿಂದ ರಾವಣನು ಹೇಗೆ ನಾಶವಾದನೋ, ಹಾಗೆಯೇ ಮನುಷ್ಯನಿಗೆ ಅಹಂಕಾರ ಒಳ್ಳೆಯದಲ್ಲ ಎಂಬ ಪಾಠ ನಮಗೆ ಸಿಗುತ್ತದೆ.

. ಶಬರಿಯ ಭಕ್ತಿ (ಸಮಾನತೆಯ ಸಂದೇಶ), ಹನುಮಂತನ ನಿಸ್ವಾರ್ಥ ಸೇವೆ. ಅಳಿಲು ಸೇವೆ (ಸಣ್ಣ ಸಹಾಯದ ಮಹತ್ವ) ವಿಭೀಷಣನ ನಿರ್ಧಾರ (ಧರ್ಮದ ಆಯ್ಕೆ) ಇವೆಲ್ಲವೂ, ನಮ್ಮ ಜೀವನದ ಅಳವಡಿಸಿಕೊಳ್ಳಬೇಕಾದ ಅಮೂಲ್ಯ ಅಂಶಗಳೆಂದು ನಾಗೇಶರು ತಿಳಿಸಿ,  ರಾಮಾಯಣದಲ್ಲಿ ಬರುವ ಅಳಿಲು ಸೇವೆಯ ಉದಾಹರಣೆಯಂತೆ, ನಾವು ಕೂಡ ದೇಶದ ಅಭಿವೃದ್ಧಿಗೆ ಸಣ್ಣದಾದರೂ ಪ್ರಾಮಾಣಿಕ ಕೊಡುಗೆ ನೀಡೋಣ…” ಎಂದು ಕರೆ ನೀಡಿದರು.

7 . ಉಮಾಶಂಕರ್ ಅವರು ತಂಡ ಸಿಹಿತಿಂಡಿ ಮತ್ತು, ಶಾಲೆಯಲ್ಲಿ ತಯಾರಿಸಿದ ಪಾನಕ ವಿತರಿಸಲಾಯ್ತು.

ರಾಮನವಮಿ ಆಚರಣೆಯ ಚಿತ್ರಗಳು ಇಲ್ಲಿ ಲಭ್ಯ : —->

https://photos.app.goo.gl/mr514vgoufR8ruw76

Leave a Comment

Your email address will not be published. Required fields are marked *

Scroll to Top