ದಿನಾಂಕ 9 ನವೆಂಬರ್ 2024 ರಂದು ಸಂಜೆ ಶ್ರೀ ಪ್ರಸನ್ನ ವೀರಾಂಜನೆಯ ಸೇವಾ ದತ್ತಿ ವತಿಯಿಂದ ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್ ಬಡಾವಣೆಯಲ್ಲಿರುವ ಶ್ರೀ ಪ್ರಸನ್ನ ವೀರಾಂಜನೆಯ ದೇವಸ್ಥಾನದಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಬಣೆಯಿಂದ ಆಚರಿಸಲಾಯಿತು ಈ ರಸಸಂಜೆ ಕಾರ್ಯಕ್ರಮದ ಮುಖ್ಯಾಂಶಗಳು ಹೀಗಿವೆ :
1) ಪ್ರಸಿದ್ಧ ವೃತ್ತಿಪರ ಗಾಯಕ, ಸಂಗೀತ ನಿರ್ದೇಶಕ ಮತ್ತು ನಟ ಶ್ರೀ ಶಶಿಧರ್ ಕೋಟೆ ಮತ್ತು ಅವರ ತಂಡದವರು ನೀಡಿದ ಸ್ಪೂರ್ತಿದಾಯಕ ದೇಶಭಕ್ತಿ, ಹಾಗೂ ನಾಡಗೀತೆಗಳು ನೆರೆದಿದ್ದ 450ಕ್ಕೂ ಹೆಚ್ಚಿನ ಸಭಿಕರನ್ನು ರಂಜಿಸಿದವು. ಪಕ್ಕವಾದ್ಯದಲ್ಲಿ ತಬಲಾ ವಿದ್ವಾನ್ ಶ್ರೀ ಗುರುರಾಜ ಆಚಾರ್, ಮ್ಯಾಂಡೋಲಿನ್ ವಿದ್ವಾನ್ ಶ್ರೀ ಕಾರ್ತಿಕ್ ಎಲ್ ಎಸ್, ಕೀಬೋರ್ಡ್ ವಿದ್ವಾನ್ ಶ್ರೀ ಶಿವಾನಂದ್ ಜೋಯಿಸ್ ಹಾಗೂ ರಿದಂ ಪ್ಯಾಡ್ ವಿದ್ವಾನ್ ಶ್ರೀ ಪುನೀತ್ ಇವರು ಕೋಟೆಯವರ ಗಾಯನಕ್ಕೆ ಸಹಕರಿದಸಿದರು.
2) “ಕವಿತೆಯಲ್ಲಿ ದೃಶ್ಯಕಲ್ಪನೆ” – ಈ ಕಾರ್ಯಕ್ರಮದಲ್ಲಿ ಶ್ರೀ ಶಶಿಧರ ಕೋಟೆಯವರ ಪ್ರಕೃತಿ ವರ್ಣನೆಯ ಗೀತೆಗೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಖ್ಯಾತಿಯ ವರ್ಣಚಿತ್ರಗಾರ ಹಾಗೂ ಕಲಾವಿಮರ್ಶಕರಾದ ಶ್ರೀ ಗಣಪತಿ ಅಗ್ನಿಹೋತ್ರಿಯವರು ಸೊಬಗಿನ ಪರಿಸರವನ್ನು ತಮ್ಮ ಕುಂಚಕಲೆಯಲ್ಲಿ ಬಿಡಿಸಿದರು.
3) ಕಳೆದ ತಿಂಗಳು ಬೆಂಗಳೂರಿನ ಬಾಬುಸಾ ಪಾಳ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಏಳು ಅಂತಸ್ತಿನ ಕಟ್ಟಡ ಕುಸಿದಿದ್ದರ ಪರಿಣಾಮವಾಗಿ ಕಟ್ಟಡದ ಕಾಮಗಾರಿ ಕೆಲಸದಲ್ಲಿ ನಿರತರಾಗಿದ್ದ ಕೆಲ ಕೂಲಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದು, ಈ ದುರ್ಘಟನೆಯಲ್ಲಿ ಆಘಾತಕ್ಕೊಳಗಾಗಿರುವ ಓರ್ವ ಸಂತ್ರಸ್ತರಿಗೆ ಕಾರ್ಯಕ್ರಮದಲ್ಲಿ ದತ್ತಿಯವತಿಯಿಂದ ಸಣ್ಣ ಧನ ಸಹಾಯ ನೀಡಲಾಯಿತು.
4) ಶ್ರೀ ಶಶಿಧರ ಕೋಟೆಯವರ ಎರಡು ಗೀತೆಗಳಿಗೆ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದ ಪರಿಣಿತ ಪಟುಗಳು ಮಾಡಿದ ಕ್ಲಿಷ್ಟಕರ ಯೋಗಗುಚ್ಛಗಳ ಪ್ರದರ್ಶನ ಸಭಿಕರೆಲ್ಲರ ಮನಸೆಳೆಯಿತು.
5) ರಾಷ್ಟ್ರಗೀತೆ ನಂತರ ಪ್ರಸಾದ ವಿನಿಯೋಗದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಕಾರ್ಯಕ್ರಮದಲ್ಲಿ ತೆಗೆದ ಚಿತ್ರಗಳು (ಕೃಪೆ : ನಂದಕುಮಾರ್-) ಕೆಳಗಿನ ಲಿಂಕಲ್ಲಿ ಲಭ್ಯ
https://photos.app.goo.gl/jKEi1sKHvgKxFf7eA