SPV Yoga

6 ಎಪ್ರಿಲ್ 2026 ರಿಂದ ಐದು ದಿನಗಳ ಕಾಲ SPV ಸೇವಾ ಟ್ರಸ್ಟ್ ವತಿಯಿಂದ ಯೋಗ ಶ್ರೀ ಪ್ರಸನ್ನ ವೀರಾಂಜನೇಯಕೇಂದ್ರದಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ನಡೆಸಲಾಯಿತು.

ದೀಪಜ್ವಲನೆ ಮಾಡಿ ಭಗವಂತನ ನಾಮ ಸ್ಮರೆಣೆಯೊಂದಿಗೆ 6 ಎಪ್ರಿಲ್ 2026 ರಂದು ಬೇಸಿಗೆ ಶಿಬಿರ ಪ್ರಾರಂಭಿಸಲಾಯಿತು.

ಮೊದಲಾಗಿ ಮಕ್ಕಳಿಗೆ ಓಂಕಾರ ಹೇಳಿಸಿ ನಿತ್ಯ ಪಠಣೆ ಮಾಡುವಂತಹ ಶ್ಲೋಕ, ಭಜನೆ ನಿತ್ಯವೂ ಅಭ್ಯಾಸ ಮಾಡಿಸಲಾಯಿತು. ದಿನವೊಂದು ನೀತಿ ಕಥೆ ಮಕ್ಕಳಿಗೆ ಮನಮುಟ್ಟುವಂತೆ ಹೇಳಲಾಗುತ್ತಿತ್ತು. ಜೊತೆಗೆ ಯೋಗಾಭ್ಯಾಸ ಮಾಡಿಸಿ ಒಂದು ಯೋಗಗುಚ್ಛ ಅಭ್ಯಾಸ ಮಾಡಿಸಲಾಯಿತು.

ಮಕ್ಕಳ ಆಸಕ್ತಿಯಕಲೆ ಮತ್ತು ಕರಕುಶಲಗಳು ಸೃಜನಶೀಲತೆ ಮತ್ತು ಕೌಶಲ್ಯವನ್ನು ಪ್ರದರ್ಶಿಸುವ ಚಟುವಟಿಕೆಗಳನ್ನು, ಕಾಗದದ ಕಲೆ, ಮತ್ತು ಮನೆಯ ಅಲಂಕಾರಿಕ ವಸ್ತುಗಳ ತಯಾರಿಕೆ ಹೇಳಿಕೊಡಲಾಯಿತು. ದಿನವೊಂದರಂತೆ ಸ್ಟ್ರಿಂಗ್ ಆರ್ಟ್, ಮಂಡಲ ಆರ್ಟ್, ದೀಪ ಪೇಂಟಿಂಗ್, ಪೇಪರ್ ಕಟ್ಟಿಂಗ್ ಎಲ್ಲವನ್ನೂ ಮಕ್ಕಳು ಕಲಿತು ಸಂಬ್ರಮ ಪಟ್ಟರು.

ದಿನವೂ ಒಂದೊಂದು ಬಗೆಯ ಮೋಜಿನ ಆಟ ಆಡಿಸಿ ಮಕ್ಕಳು ನಕ್ಕು ನಲಿದರು. ಪ್ರತಿದಿನ ಮಕ್ಕಳಿಗೆ ಏನಾದರೊಂದು ಸಿಹಿ ಅಥವಾ ಜೂಸ್ ನೀಡಲಾಯಿತು.

ಸಮಾರೋಪದ, ಕೊನೆಯ ದಿನ 10 ಏಪ್ರಿಲ್ 2026 ರಂದು ಪ್ರಾರ್ಥನೆ, ದೀಪಜ್ವಲನೆಯೊಂದಿಗೆ ಆರಂಭಿಸಲಾಯಿತು. ಲತಾಹೆಗಡೆ ಸ್ವಾಗತದೊಂದಿಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಕ್ಕಳು ಮಾಡಿದ ಎಲ್ಲಾ ಬಗೆಯ ಕಲಾ ಕೌಶಲಗಳನ್ನು ಪ್ರದರ್ಶನಕ್ಕೆ ಇಡಿಸಲಾಯಿತು. ಮಕ್ಕಳು ಕಲಿತ ಶ್ಲೋಕ, ಭಜನೆ ಹಾಡಿದರು. ಕಲಿತ ಯೋಗ ಫಾರ್ಮೇಶನ್ ಪ್ರದರ್ಶಿಸಿದರು.

ಮಕ್ಕಳಿಗೆ ಸುಮಾ ಮೇಡಂ ಮನ ಹೊಕ್ಕುವಂತಹ ಹಿರಿಯರ ಕುರಿತಾದ ನೀತಿಕಥೆ ಹೇಳಿದರು. ಶಾಂತಕುಮಾರ್, ನಾಗೇಶ್ ಪ್ರಸನ್ನ ಅವರು ಮಕ್ಕಳಿಗೆ ಶುಭ ಹಾರೈಸಿದರು. ಪಾಲಕರು ಮಕ್ಕಳ ಕಲೆಗಳನ್ನು ನೋಡಿ ಖುಷಿಪಟ್ಟರಲ್ಲದೆ ಶುಭ ಹಾರೈಸಿದರು. ಶ್ರೀ ರವೀಂದ್ರನಾಥ ಮಕ್ಕಳಿಗಾಗಿ ತಂದ ಗಿಫ್ಟ್ ನೀಡಲಾಯಿತು. ಶ್ರೀಮತಿ ಭಾಗ್ಯ ಶಿವಕುಮಾರ್ ಅವರು ತಂದ ಗೀಫ್ಟ್ ಮತ್ತು ಚಾಕಲೇಟ್ ವಿತರಿಸಲಾಯಿತು. ಸಹಕರಿಸಿದ ಶ್ರೀಮತಿ ಸುಲಕ್ಷಣ, ಲತಾ ಗಿರೀಶ್, ಅನ್ನಪೂರ್ಣ ಅವರಿಗೂ ವಂದನೆಗಳನ್ನು ತಿಳಿಸಲಾಯಿತು.

ಬಾದಾಮಿಹಾಲು ನೀಡಿದ ಶ್ರೀ ಪ್ರವೀಶ್ ಗೂ ಧನ್ಯವಾದಗಳನ್ನು ಹೇಳಲಾಯಿತು. ಕೊನೆಯಲ್ಲಿ ರಾಷ್ಟ್ರಗೀತೆ ಹೇಳಿ, ತಂದ ಸಿಹಿ ಹಂಚಲಾಯಿತು. ಬಾದಾಮಿ ಹಾಲು ಕುಡಿದು ಎಲ್ಲರೂ ಅವರವರ ಮನೆಗೆ ತೆರಳಿದರು.

————- ವರದಿ ಕೃಪೆ : ಶ್ರೀಮತಿ ಲತಾ ಹೆಗಡೆ—————–

ಕಾರ್ಯಕ್ರಮದ ಚಿತ್ರಗಳನ್ನು ಈ ಕೊಂಡಿಯಲ್ಲಿ ನೋಡಿ —>
https://photos.app.goo.gl/b95oq1muouY72AeYA

Leave a Comment

Your email address will not be published. Required fields are marked *

Scroll to Top